      ಮೂಲದ ಜತೆ ಪರಿಶೀಲಿಸಿ

ಐಸೊಲ್ಯೂಸಿನ್: ಆರು ಇಂಗಾಲಗಳನ್ನುಳ್ಳ ಒಂದು ್ಫ-ಅಮೈನೋ ಆಮ್ಲ ಮತ್ತು ಲ್ಯೂಸಿನ್ನಿನ ಐಸೋಮರ್. ಐಸೊಲ್ಯೂಸಿನ್ನಿನ ಅಣುವಿನಲ್ಲಿ ಎರಡು ಅಸಮಾಂಗ (ಅಸಿಮೆಟ್ರಿಕ್) ಇಂಗಾಲಗಳಿರುವುದರಿಂದ ನಾಲ್ಕು ಸ್ಥಾನೀಯ (ಸ್ಪೇಶಿಯಲ್) ಐಸೊಮರುಗಳು ಸಾಧ್ಯ. ಅವುಗಳಲ್ಲಿ ಎರಡು ಆ-ಮತ್ತು ಐ-ಐಸೊಲ್ಯೂಸಿನ್. ಉಳಿದವೆರಡು ಆ-ಮತ್ತು ಐ-ಅಲ್ಲೊಐಸೊಲ್ಯೂಸಿನ್ ಅಣುಗಳು.
ಅಊ3-ಅಊ2-ಅಊ-ಅಊ-ಅಔಔಊ
                                                     |      |
                                                 ಅಊ3  ಓಊ2
1904ರಲ್ಲಿ ಏರ್ಲಿಕ್ ಎಂಬ ವಿಜ್ಞಾನಿ (ನೋಡಿ- ಏರ್ಲಿಕ್,-ಪಾಲ್) ಈ ಆಮ್ಲವನ್ನು ಮೊದಲ ಬಾರಿಗೆ ಭೇಟಿ ಕಾಕಂಬಿಯಿಂದಲೂ (ಮೊಲಾಸ್ಸಸ್) ಅನಂತರ ರಕ್ತದಲ್ಲಿನ ಪ್ರೋಟೀನಿನಿಂದಲೂ ಬೇರ್ಪಡಿಸಿದ. 1907ರಲ್ಲಿ ಅದರ ರಚನೆಯನ್ನೂ ಸಾಧಿಸಿದ. 1931ರ ವೇಳೆಗೆ ಈ ಸಂಯುಕ್ತದ ಸಂಯೋಜನೆಯೂ ನಾಲ್ಕು ಬಗೆಯ ಐಸೊಮರುಗಳ ಬೇರ್ಪಡೆಯೂ ಹಲವಾರು ವಿಜ್ಞಾನಿಗಳ ಪ್ರಯತ್ನದಿಂದ ಸಾಧ್ಯವಾಯಿತು.
ಪ್ರಕೃತಿಯಲ್ಲಿ ಲ್ಯೂಸಿನ್ ಮತ್ತು ಐಸೊಲ್ಯೂಸಿನುಗಳು ಒಟ್ಟಾಗಿ ದೊರೆಯುತ್ತವೆ. ಆದರೆ ಐಸೊಲ್ಯೂಸಿನಿನ ತಾಮ್ರಲವಣ ಲ್ಯೂಸಿನಿನ ತಾಮ್ರಲವಣಕ್ಕಿಂತ ನೀರಿನಲ್ಲಿ ಹೆಚ್ಚು ದ್ರವ್ಯವಾದ್ದರಿಂದ (ಸಾಲ್ಯುಬಲ್) ಅಂಶತಃ ಸ್ಫಟಿಕೀಕರಣ (ಫ್ರಾಕ್ಷನಲ್ ಕ್ರಿಸ್ಟಲೈಸೇಷನ್) ವಿಧಿಯಿಂದ ಬೇರ್ಪಡಿಸಬಹುದು. ಆ- ಮತ್ತು ಐ- ಐಸೊಮರುಗಳ ಮಿಶ್ರಣಗಳನ್ನು ಬೇರ್ಪಡಿಸಲು ನಿರ್ದಿಷ್ಟ ಏಕಾಣುಜೀವಿಗಳನ್ನೂ (ಬ್ಯಾಕ್ಟೀರಿಯ) ನಿರ್ದಿಷ್ಟ ತಳಿಗಳ ಯೀಸ್ಟನ್ನೂ ಉಪಯೋಗಿಸಲಾಗುತ್ತದೆ. 
ಐ-ಐಸೊಲ್ಯೂಸಿನಿನ ಕೊರತೆಯಿಂದ ಪ್ರಾಣಿಗಳ ರಕ್ತರಸದಲ್ಲಿನ (ಪ್ಲಾಸ್ಮಾ) ಪ್ರೋಟೀನ್ ಅಂಶದಲ್ಲಿ ವೈಪರೀತ್ಯವಾಗುತ್ತದೆಂದು ತಿಳಿದುಬಂದಿದೆ. ಐಸೊಲ್ಯೂಸಿನ್ ಅಥವಾ ಅದನ್ನುಳ್ಳ ಪ್ರೋಟೀನುಗಳ ಕೊಡುಗೆಯಿಂದ ಈ ವೈಪರೀತ್ಯ ಅಥವಾ ಕೊರತೆ ತುಂಬಿ ರಕ್ತರಸದಲ್ಲಿ ಪ್ರೋಟೀನ್ ಅಂಶ ವೃದ್ಧಿಯಾಗಿ ಸಹಜಸ್ಥಿತಿಯ ಮಟ್ಟವನ್ನು ಮುಟ್ಟುತ್ತದೆ. (ಕೆ.ಟಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ